gototopgototop


Home
पीडीएफ़ मुद्रण
AddThis Social Bookmark Button

ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆ

ಲಿಂಗತ್ವ ಸಮಾನತೆಯನ್ನು ಖಚಿತ ಪಡಿಸಲು ಮತ್ತು ಮಹಿಳೆಯರನ್ನು ಅಬಿವೃದ್ದಿಯ ಮುಖ್ಯವಾಹಿನಿಯಲ್ಲಿ ತರಲು ನಿದಿಯನ್ನು ಅಂತರ-ವಲಯ ಹಂಚಿಕೆ ಮಾಡುವ ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ದೃಷ್ಠಿಯಿಂದ ನಿರ್ದೇಶನಾಲಯದಲ್ಲಿ ದಿನಾಂಕ 03-05-2003ರಿಂದ ಕರ್ನಾಟಕ ಮಹಿಳಾ ಅಬಿವೃದ್ದಿ ಯೋಜನಾ ಘಟಕವನ್ನು ಪ್ರಾರಂಬಿಸಲಾಗಿದೆ. ಲಿಂಗತ್ವಕ್ಕೆ ಸಂಬಂಧಪಟ್ಟ  ವಿಷಯಗಳನ್ನು ಬಗೆಹರಿಸಲು ಮೊದಲ ಬಾರಿಗೆ ಸರ್ಕಾರವು ಜಾಗೃತವಾದ ಮತ್ತು ಸಕಾರಾತ್ಮಕವಾದ ಪ್ರಯತ್ನ ಮಾಡಿದ್ದರಿಂದ ಈ ಆದೇಶವು  ಹೆಗ್ಗುರುತಿನ ಧೋರಣಾತ್ಮಕ ಆದೇಶವಾಗಿರುತ್ತದೆ. ಸರ್ಕಾರದಲ್ಲಿ ವಿವಿಧ ಇಲಾಖೆಗಳ ಎಲ್ಲಾ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಹಾಗೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕಾರ್ಯಕ್ರಮಗಳಿಗೆ ಒದಗಿಸುವ ಸಂಪನ್ಮೂಲಗಳಲ್ಲಿ ಮೂರನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವುದೇ ಈ ಯೋಜನೆಯ ಉದ್ದೇಶವಾಗಿರುತ್ತದೆ. 

 
2013-14ನೇ ಸಾಲಿನಲ್ಲಿ 25 ಇಲಾಖೆಗಳು 301 ಕಾರ್ಯಕ್ರಮಗಳಡಿಯಲ್ಲಿ ಸದರಿ ಯೋಜನೆಗಾಗಿ ಅನುದಾನವನ್ನು ನಿಗದಿಪಡಿಸಿದೆ. ಈ ಇಲಾಖೆಗಲ್ಲಿ ಇರುವ ಒಟ್ಟು ಆಯವ್ಯಯ  ರೂ.11334.27 ಕೋಟಿಗಳಲ್ಲಿ ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆಗಾಗಿ 1/3ಭಾಗ ಅಂದರೆ ರೂ.4591.50 ಕೋಟಿಗಳನ್ನು ನಿಗದಿಪಡಿಸಿದ್ದು ಮಾರ್ಚ್ 2014ರ ಅಂತ್ಯಕ್ಕೆ ರೂ.4777.40 ಕೋಟಿಗಳನ್ನು ಈ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿರುತ್ತಾರೆ.

2014-15ನೇ ಸಾಲಿನಲ್ಲಿ 25 ಇಲಾಖೆಗಳು 281 ಕಾರ್ಯಕ್ರಮಗಳಡಿಯಲ್ಲಿ ಸದರಿ ಯೋಜನೆಗಾಗಿ ಅನುದಾನವನ್ನು ನಿಗದಿಪಡಿಸಿದೆ. ಈ ಇಲಾಖೆಗಲ್ಲಿ ಇರುವ ಒಟ್ಟು ಆಯವ್ಯಯ  ರೂ.20960.50 ಕೋಟಿಗಳಲ್ಲಿ ಕರ್ನಾಟಕ ಮಹಿಳಾ ಅಬಿವೃದ್ಧಿ ಯೋಜನೆಗಾಗಿ 1/3ಭಾಗ ಅಂದರೆ ರೂ.7168.38 ಕೋಟಿಗಳನ್ನು ನಿಗದಿಪಡಿಸಿದ್ದು ಮಾರ್ಚ್ 2015ರ ಅಂತ್ಯಕ್ಕೆ ರೂ.7686.19 ಕೋಟಿಗಳನ್ನು ಈ ಕಾರ್ಯಕ್ರಮಗಳಿಗೆ ವೆಚ್ಚ ಮಾಡಿರುತ್ತಾರೆ.

 


Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats