gototopgototop


Home ಕಾರ್ಯಕ್ರಮಗಳು ಮಹಿಳಾ ಕಾರ್ಯಕ್ರಮಗಳು
पीडीएफ़ मुद्रण
AddThis Social Bookmark Button

ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗೆ ಶಿಶುಪಾಲನಾ  ಕೇಂದ್ರಗಳು

ಈ ಯೋಜನೆಯಡಿ  ಗ್ರಾಮಾಂತರ ಪ್ರದೇಶಗಳಲ್ಲಿ ವ್ಯವಸಾಯ  ಹಾಗೂ ಇನ್ನಿತರ ವೃತ್ತಿನಿರತ ಮಹಿಳೆಯರ ಮಕ್ಕಳಿಗೆ ಶಿಶುಪಾಲನಾ ಕೇಂದ್ರಗಳನ್ನು ಪ್ರಾರಂಬಿಸಲು ಮಹಿಳಾ   ಮಂಡಲಗಳಿಗೆ ಮತ್ತು ಸ್ವಯಂ ಸೇವಾ ಸಂಸ್ಥೆಗಳಿಗೆ ಜಿಲ್ಲಾ ಪಂಚಾಯತಿ ಮೂಲಕ ಅನುದಾನವನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ 3 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಮಕ್ಕಳಿಗೆ ದಿನದ ವೇಳೆಯಲ್ಲಿ ಸೇವೆಗಳನ್ನು   ಒದಗಿಸುತ್ತದೆ.  ಈ ಸೇವೆಗಳು ಆರೋಗ್ಯ, ಆರೈಕೆ,  ಪೂರಕ ಪೌಷ್ಠಿಕ ಆಹಾರ, ಚುಚ್ಚುಮದ್ದು, ಆಟಿಕೆಗಳು, ಮನೋರಂಜನೆ ಮುಂತಾದವುಗಳನ್ನು  ಒಳಗೊಂಡಿರುತ್ತದೆ.  

2013-14ನೇ ಸಾಲಿನಲ್ಲಿ ಈ ಯೋಜನೆಯಡಿ ರೂ.18.97ಲಕ್ಷ ರೂಪಾಯಿಗಳ ಅನುದಾನವನ್ನು  ಒದಗಿಸಲಾಗಿದೆ.  ಮಾರ್ಚ್ 2014ರ ಅಂತ್ಯದವರೆಗೆ ರೂ.8.43 ಲಕ್ಷ ವೆಚ್ಚ ಭರಿಸಲಾಗಿದೆ.

2014-15ನೇ ಸಾಲಿನಲ್ಲಿ ಯೋಜನೆಯಡಿ ಯಾವುದೇ ಅನುದಾನ ಒದಗಿಸಿರುವುದಿಲ್ಲ.

 

 

Helplines

 




Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats