gototopgototop


Home
PDF Print
AddThis Social Bookmark Button

ಭಾಗ್ಯಲಕ್ಷ್ಮಿ ಯೋಜನೆ

ಹೆಣ್ಣು ಮಗುವಿನ ಸ್ಥಾನವನ್ನು  ಮೊದಲು ಕುಟುಂಬದಲ್ಲಿ ನಂತರ  ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು  ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ "ಭಾಗ್ಯಲಕ್ಷ್ಮಿ" ಎಂಬ ಹೊಸ  ಯೋಜನೆಯನ್ನು ರೂಪಿಸಿದೆ.
ಈ ಯೋಜನೆಯ ಆಥರ್ಿಕ  ಸೌಲಭ್ಯವನ್ನು ಹೆಣ್ಣು ಮಗುವಿಗೆ ಅದರ ತಾಯಿ/ತಂದೆ/ಪೋಷಕರ ಮೂಲಕ ಕೆಲವು ನಿಭಂದನೆಗಳನ್ನು ಪೂರೈಸಿದಲ್ಲಿ ನೀಡಲಾಗುವುದು.
ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬಗಳಲ್ಲಿ 31-3-06ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ. ಮಗು ಜನಿಸಿದ ಒಂದು ವರ್ಷದ ವರೆಗೆ ಜನನ ಪ್ರಮಾಣ ಪತ್ರವನ್ನು            ಒದಗಿಸಿ ನೋಂದಾಯಿಸಲು ಅವಕಾಶವಿದೆ.
ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ.ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರತಕ್ಕದ್ದು ಮತ್ತು ಕುಟುಂಬದಲ್ಲಿನ ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚಿಗೆ ಇರಬಾರದು.
ನೊಂದಣಿ ನಂತರ  ಹಾಗೂ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯು ಪೂರ್ಣ ಪರಿಶೀಲನೆ  ನಂತರ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು  ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ  ನಿಶ್ಚಿತ ಠೇವಣಿಯನ್ನು ಇಡಲಾಗುತ್ತದೆ.
ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣುಮಗುನಿನ ಹೆಸರಿನಲ್ಲಿ ಇಟ್ಟ ರೂ.10,000/-ಗಳ ಠೇವಣಿಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ,ಠೇವಣಿ ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗಳಿಗೆ 18 ವರ್ಷಗಳು ಪೂರ್ಣಗೊಂಡನಂತರ ದೊರಕಿಸಿಕೊಡುತ್ತದೆ. ರೂ 34751/- ನ್ನು ಮೊದಲ ಮಗುವಿಗೆ ಮತ್ತು ರೂ 40,918 ನ್ನು ಎರಡನೇ ಮಗುವಿಗೆ ನೀಡಲಾಗುತ್ತದೆ.
ಫಲಾನುಭವಿಗೆ ವಿದ್ಯಾಥರ್ಿ ವೇತನ, ವಿಮೆ ಸೌಲಭ್ಯ ಮುಂತಾದ ಮಧ್ಯಂತರ ಸಂದಾಯಗಳನ್ನು ಯೋಜನೆಯಡಿ ತಿಳಿಸಲಾದ ಅರ್ಹತೆ ಮಾನದಂಡಗಳನ್ನು ಪೂರೈಸುತ್ತಿದ್ದಲ್ಲಿ                   ನೀಡಲಾಗುವುದು.
ಹೆಣ್ಣು ಮಗು ಖಾಯಿಲೆ ಬಿದ್ದಲ್ಲಿ, ಆರೋಗ್ಯ ವಿಮೆ ಸೌಲಭ್ಯವನ್ನು  ಗರಿಷ್ಠ ರೂ.25000ರ ವರೆಗೆ ನೀಡಲಾಗುವುದು
ವಿಮಾದಾರರು  ಸ್ವಾಭಾವಿಕ ಸಾವು ಹೊಂದಿದಲ್ಲಿ ರೂ 42500/- ವಿಮೆ ಹಣ                                         ಒದಗಿಸಲಾಗುವುದು.
ವಿಮಾದಾರರು ಅಪಘಾತದಿಂದ  ಸತ್ತರೆ ರೂ 1,00,000 ವಿಮೆ ಹಣವನ್ನು ಕುಟುಂಬಕ್ಕೆ ನೀಡಲಾಗುವುದು.
ಅರ್ಹತೆಯ ಅಂಶಗಳು
ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು.
ಮಗುವಿಗೆ : -
ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿರೋದಕ ಹಾಕಿಸಿರಬೇಕು
ಅಂಗನವಾಡಿ ಕೇಂದ್ರಕ್ಕೆ ನೋಂದಣಿಯಾಗಿರಬೇಕು
ಶಿಕ್ಷಣ ಇಲಾಖೆಯ ನೋಂದಾಯಿತ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿಸಿರಬೇಕು.
ಮಗು ಬಾಲ ಕಾಮರ್ಿಕಳಾಗಿರಬಾರದು
18 ವರ್ಷ ಪೂರ್ಣಗೊಳ್ಳುವವರೆಗೆ ವಿವಾಹ ಆಗಿರಬಾರದು.
ಈ ಯೋಜನೆಯನ್ನು  ಜೀವ ವಿಮೆ ಕಾಪರ್ೋರೇಷನ್. ಭಾರತದ ಸಹಯೋಗದೊಂದಿಗೆ ಅನುಷ್ಠಾನ    ಮಾಡಲಾಗುವುದು.
ಫಲಾನುಭವಿಯು ಕಡ್ಡಾಯವಾಗಿ 8ನೇ ತರಗತಿಯಲ್ಲಿ ಉತ್ತೀರ್ಣವಾಗತಕ್ಕದ್ದು. ಹಾಗೂ 18 ವರ್ಷ ತುಂಬುವ ಮುನ್ನ ವಿವಾಹವಾದಲ್ಲಿ, 18ನೇ ವರ್ಷದೊಳಗೆ ಮರಣ ಹೊಂದಿದಲ್ಲಿ ಹೂಡಲಾದ  ಮೊಬಲಗನ್ನು ಸಕರ್ಾರಕ್ಕೆ ಮುಟ್ಟುಗೋಲು   ಹಾಕಿಕೊಳ್ಳಲಾಗುವುದು. ವಿದ್ಯಾಥರ್ಿ ವೇತನದ ವಿವರಗಳು ಈ ಕೆಳಗಿನಂತಿರುತ್ತವೆ:


ತರಗತಿ    ವಾಷರ್ಿಕ ವಿದ್ಯಾಥರ್ಿವೇತನದ ಮೊತ್ತ                        ರೂ. ಗಳಲ್ಲಿ    
1 ರಿಂದ 3ನೇ ತರಗತಿ    ಪ್ರತಿ ತರಗತಿಗೆ 300/-    
4ನೇ ತರಗತಿ      500/-    
5ನೇ ತರಗತಿ      600/-    
6 ರಿಂದ 7ನೇ ತರಗತಿ      700/-    
8ನೇ ತರಗತಿ      800/-    
9ರಿಂದ 10ನೇ ತರಗತಿ      1000/-    


ಭಾಗ್ಯಲಕ್ಷ್ಮಿ ಯೋಜನೆಯನ್ನು ಆಗಸ್ಟ್ 2008ರಲ್ಲಿ ಭಾಗಶ: ಮಾರ್ಪಡಿಸಲಾಗಿರುತ್ತದೆ. ಪರಿಷ್ಕರಿಸಲಾದ ಯೋಜನೆಯು ದಿನಾಂಕ 01/08/08ರಂದು ಹಾಗೂ ನಂತರ ಜನಿಸಿದ ಮಕ್ಕಳಿಗೆ ಅನ್ವಯಿಸುತ್ತದೆ.

ಹಾಲಿ ಜಾರಿಯಲ್ಲಿರುವ ಯೋಜನೆಯನ್ನು ಈ ಕೆಳಗಿನಂತೆ  ಪರಿಷ್ಕರಿಸಲಾಗಿದೆ.

ರೂ. 10,000/-ಗಳ ಬದಲಾಗಿ ಯೋಜನೆಯಡಿ ನೋಂದಣಿಯಾದ ಕುಟುಂಬದ ಮೊದಲನೇಯ  ಮಗುವಿನ ಹೆಸರಿನಲ್ಲಿ ರೂ.19300/- ಹಾಗೂ ಎರಡನೇಯ ಮಗುವಿನ ಹೆಸರಿನಲ್ಲಿ ರೂ.18,350/-ಗಳ ಮೊತ್ತವನ್ನು ಪಾಲುದಾರು ಹಣಕಾಸು ಸಂಸ್ಥೆಯಲ್ಲಿ ಠೇವಣಿಯಲ್ಲಿರಿಸಿ, 18 ವರ್ಷಗಳು ಪೂರ್ಣಗೊಂಡಾಗ ಕುಟುಂಬದ ಮೊದಲನೇಯ ಫಲಾನುಭವಿಗೆ ರೂ.1,00,097/- ಹಾಗೂ ಎರಡನೇ ಫಲಾನುಭವಿಗೆ     ರೂ. 1,00,052/- ಪರಿಪಕ್ವ ಮೊತ್ತ ದೊರೆಯುತ್ತದೆ.
ಫಲಾನುಭವಿಯು 15 ವರ್ಷ ತಲುಪಿದ ನಂತರ 10ನೇ ತರಗತಿಯಲ್ಲಿ ಉತ್ತೀರ್ಣಳಾಗಿ, ಮುಂದಿನ ವಿದ್ಯಾಭ್ಯಾಸವನ್ನು ಕೈಗೊಳ್ಳಲು ಆಸಕ್ತಿ ಇದ್ದಲ್ಲಿ, ಬಾಂಡ್ನ್ನು ಅಂಗೀಕೃತ  ಬ್ಯಾಂಕ್ಗಳಲ್ಲಿ ಅಡಮಾನವಿರಿಸಿ ಗರಿಷ್ಠ ರೂ.50,000/-ಗಳ ವರೆಗೆ ಸಾಲವನ್ನು ಪಡೆಯಬಹುದಾಗಿರುತ್ತದೆ.
ಫಲಾನುಭವಿಯ ತಂದೆ/ತಾಯಿ/ಪೋಷಕರ ಗ್ರಾಮೀಣ ಭೂರಹಿತ ಕುಟುಂಬಕ್ಕೆ ಸೇರಿದ್ದಲ್ಲಿ ಜನಶ್ರೀ ಬೀಮಾ ಯೋಜನೆಯಡಿಯಲ್ಲಿ ವಿಮೆ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ
ವಿದ್ಯಾಥರ್ಿ ವೇತನ ಹಾಗೂ ವೈದ್ಯಕೀಯ ವಿಮಾ ಸೌಲಭ್ಯಗಳನ್ನು ಕೈಬಿಡಲಾಗಿದೆ.

2006-07 ರಿಂದ 2010-11 ರವರೆಗೆ  1376.53 ಕೋಟಿ ರೂಪಾಯಿಗಳನ್ನು  ವೆಚ್ಚ ಮಾಡಲಾಗಿದ್ದು, 1018189 ಫಲಾನುಭವಿಗಳಿಗೆ ಬಾಂಡ್ ನೀಡಲಾಗಿದೆ.
     2011-12 ನೇ ಸಾಲಿಗೆ ಫಲಾನುಭವಿಗಳಗೆ ಬಾಂಡ್ ವಿತರಿಸಲು 486.14 ಕೋಟಿಗಳನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಇದರಲ್ಲಿ 254473 ಫಲಾನುಭವಿಗಳಿಗೆ ಬಾಂಡ್ ವಿತರಿಸಲು ಎಲ್ಐಸಿಗೆ ಬಿಡುಗಡೆ ಮಾಡಲಾಗಿದೆ.

 

 

 

 


Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats