gototopgototop


Home
पीडीएफ़ मुद्रण
AddThis Social Bookmark Button

ವೀಕ್ಷಣಾಲಯ

ವೀಕ್ಷಣಾಲಯಗಳು ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳಿಗಾಗಿ ಅವರ ವಿರುದ್ದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಸ್ವೀಕರಿಸುವ ಸಂಸ್ಥೆಗಳಾಗಿರುತ್ತದೆ.
ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಶಾಸನಗಳನ್ವಯ ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳನ್ನು ಮಾತ್ರ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಕಾನೂನಿನೊಡನೆ ಸಂಘರ್ಷಣೆಗೆ ಒಳಪಟ್ಟ ಮಕ್ಕಳನ್ನು ಪೊಲೀಸರ ಮುಖಾಂತರ ದಾಖಲು ಪಡಿಸಲಾಗುತ್ತದೆ. ಅಲ್ಲಿ 4 ತಿಂಗಳವರೆಗೆ ಸಾಮಾನ್ಯವಾಗಿ ಪರಿವೀಕ್ಷಣೆಗಾಗಿ ಇಡಲಾಗುವುದು. ಮಂಜೂರಾಗಿರುವ 29 ವೀಕ್ಷಣಾಲಯಗಳಲ್ಲಿ 8 ವೀಕ್ಷಣಾಲಯಗಳು ಬೆಂಗಳೂರು ನಗರ, ಮೈಸುರು, ದಾರವಾಡ, ಗುಲ್ಬರ್ಗ, ಶಿವಮೊಗ್ಗ, ಬಳ್ಳಾರಿ, ಬಿಜಾಪುರ ಮತ್ತು ಮಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಉಳಿದ 21 ವೀಕ್ಷಣಾಲಯಗಳೂ ಪ್ರಾರಂಭವಾಗಬೇಕಾಗಿದೆ.
ಜನವರಿ 2010ರ ಅಂತ್ಯದವರೆಗೆ 8 ವೀಕ್ಷಣಾಲಯಗಳಲ್ಲಿ 181 ಮಕ್ಕಳು ದಾಖಲಾಗಿದ್ದು ಜನವರಿ ಅಂತ್ಯಕ್ಕೆ 136 ಮಕ್ಕಳು ಇದ್ದಾರೆ. 6 ವೀಕ್ಷಣಾಲಯಗಳೂ ಸಕರ್ಾರಿ ಕಟ್ಟಡದಲ್ಲಿದ್ದು 2 ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತವೆ.
ಬಾಲಾಪರಾಧಿಗಳ ಪುನರ್ವಸತಿಗಾಗಿ ವೀಕ್ಷಣಾಲಯಕ್ಕೆ ಸೇರಿದಂತೆ 2 ವಿಶೇಷ ಗೃಹಗಳ ಘಟಕವನ್ನು ಸ್ಥಾಪಿಸಲಾಗಿದೆ. ಬಾಲಕಿಯರಿಗಾಗಿ ಬೆಂಗಳೂರಿನಲ್ಲಿ ಒಂದು ಬಾಲಕಿಯರ ಬಾಲಮಂದಿರಕ್ಕೆ ಹೊಂದಿಕೊಂಡಂತೆ ಹಾಗೂ ಬಾಲಕರಿಗಾಗಿ ಧಾರವಾಡದಲ್ಲಿ ವೀಕ್ಷಣಾಲಯಕ್ಕೆ ಹೊಂಡಿಕೊಂಡಂತೆ ಬಾಲಕರಿಗಾಗಿ ಧಾರವಾಡದಲ್ಲಿ ವೀಕ್ಷಣಾಲಯಕ್ಕೆ ಹೊಂದಿಕೊಂಡಂತೆ ಸ್ಥಾಪಿಸಲಾಗಿದೆ. ಜನವರಿ 2010ರಂತ್ಯಕ್ಕೆ ವಿಶೇಷ ಗೃಹಗಳಿಗೆ ಯಾವುದೇ ಮಕ್ಕಳು ದಾಖಲಾಗಿಲ್ಲ

 


Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats