gototopgototop


Home
पीडीएफ़ मुद्रण
AddThis Social Bookmark Button

ಬಾಲಕಿಯರ ವಸತಿ ನಿಲಯಗಳು

ರಾಜ್ಯದ ಹಿಂದುಳಿದ ಭಾಗಗಳ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು ಹಾಗೂ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಬಾಲಕಿಯರ ವಸತಿ ನಿಲಯಗಳನ್ನು ಇಲಾಖೆಯು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸುತ್ತಿದೆ.     ಸರ್ಕಾರ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ 6ನೇ ತರಗತಿ ಮೇಲ್ಪಟ್ಟು ಮೆಟ್ರಿಕ್ ನಂತರದ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಗ್ರಾಮಾಂತರ ಪ್ರದೇಶದಲ್ಲಿ ವಾಸವಾಗಿರುವ ಹಾಗೂ ವಾರ್ಷಿಕ ವರಮಾನ 10000 ರೂಪಾಯಿ ಮೀರದ ಕುಟುಂಬದಲ್ಲಿನ ಹೆಣ್ಣು ಮಕ್ಕಳಿಗೆ ಈ ವಸತಿ ನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶವಿರುತ್ತದೆ.  


ಪ್ರಸ್ತುತ ರಾಜ್ಯದಲ್ಲಿ 44 ಬಾಲಕಿಯರ ವಸತಿ ನಿಲಯಗಳು ಇಲಾಖೆಯಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ 23 ಮೆಟ್ರಿಕ್ ಪೂರ್ವ ಹಾಗೂ 21 ಮೆಟ್ರಿಕ್ ನಂತರದ ವಸತಿ ನಿಲಯಗಳಾಗಿವೆ.

2013-14ನೇ ಸಾಲಿನಲ್ಲಿ ರೂ.305.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಇದರಲ್ಲಿ ರೂ.320.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರ್ಚ್ 2014ರ ಅಂತ್ಯದವರೆಗೆ ರೂ.318.65 ಲಕ್ಷಗಳ ವೆಚ್ಚ ಭರಿಸಲಾಗಿದೆ.  ಹೆಚ್ಚುವರಿ ಅನುದಾನ ರೂ.15.00 ಲಕ್ಷಗಳನ್ನು ಅಂಗನವಾಡಿ ಕಾರ್ಯಕರ್ತೆಯರ / ಸಹಾಯಕಿಯರ ಮರಣ ಪರಿಹಾರ ನಿಧಿಯಲ್ಲಿ ಉಳಿಕೆಯಿದ್ದ ಅನುದಾನದಿಂದ ಬಿಡುಗಡೆ ಮಾಡಲಾಗಿದೆ.

2014-15ನೇ ಸಾಲಿನಲ್ಲಿ ರೂ.440.00 ಲಕ್ಷಗಳ ಆಯವ್ಯಯ ಒದಗಿಸಲಾಗಿದೆ. ಇದರಲ್ಲಿ ರೂ.415.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದ್ದು, ಮಾರ್ಚ 2015ರ ಅಂತ್ಯದವರೆಗೆ ರೂ.390.95 ಲಕ್ಷಗಳ ವೆಚ್ಚ ಭರಿಸಲಾಗಿದೆ.

 


Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats