gototopgototop


Home ಕಾರ್ಯಕ್ರಮಗಳು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು
पीडीएफ़ मुद्रण
AddThis Social Bookmark Button

ಬಾಲ ಮಂದಿರಗಳು

Child Development | Related Resource | Faqs

ಬಾಲ ಮಂದಿರಗಳು ಯಾವುದೇ ವಿಚಾರಣೆ ಕಾಯ್ದಿಟ್ಟ ಅವಧಿಯಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ಇರುವ ಸ್ವಾಗತ ಕೇಂದ್ರಗಳು. ಹೆಣ್ಣು ಮಕ್ಕಳಿಗಾಗಿ 17 ಬಾಲ ಮಂದಿರಗಳು ಗಂಡು ಮಕ್ಕಳಿಗಾಗಿ 26 ಬಾಲ ಮಂದಿರಗಳುನ್ನು ನಡೆಸಲಾಗುತ್ತಿದೆ. ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ತಂದು ಬಾಲ ಮಂದಿರಗಳಿಗೆ ದಾಖಲು ಮಾಡಲಾಗುವುದು. ಬಾಲಮಂದಿರವು ವಸತಿಯ ಜೊತೆಗೆ ಶಿಕ್ಷಣ, ಮನೋರಂಜನೆ, ತರಬೇತಿ ಹಾಗು ಮಕ್ಕಳ ಪುನರ್ವಸತಿಯನ್ನು ಮಾಡುತ್ತದೆ. ಸಕರ್ಾರ ನಿಗದಿಪಡಿಸಿರುವ ಅಳತೆಯಲ್ಲಿ ಮಕ್ಕಳಿಗೆ ಆಹಾರ, ಬಟ್ಟೆ ಹಾಗು ಹಾಸಿಗೆ ಹೊದಿಕೆಯನ್ನು ಒದಗಿಸಲಾಗುವುದು. ಮಕ್ಕಳಿಗೆ ಶಿಕ್ಪ್ಷಣದ ಜೊತೆಗೆ ವಿವಿದ ಕಲೆಗಳಲ್ಲಿ ತರಬೇತಿ ನೀಡಲಾಗುವುದು. 6 ವರ್ಷಕ್ಕಿಂತ ಚಿಕ್ಕ ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಶಿಶು ಮಂದಿರ ಸ್ಥಾಪಿಸಲಾಗಿದೆ.
ರಾಜ್ಯದಲ್ಲಿ ಬುದ್ದಿ ಮಾಂದ್ಯ ಬಾಲಕರಿಗಾಗಿ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಹಾಗೂ ಬಾಲಕಿಯರಿಗಾಗಿ ಹುಬ್ಬಳ್ಳಿ ಮತ್ತು ಗುಲ್ಬರ್ಗದಲ್ಲಿ ಬಾಲಮಂದಿರಗಳು ಕಾರ್ಯನಿರ್ವಹಿಸುತ್ತಿದ್ದು 18 ವರ್ಷ ಒಳಗಿನ ಬುದ್ದಿಮಾಂಧ್ಯ ಮಕ್ಕಳನ್ನು ಈ ಸಂಸ್ಥೆಗಳಿಗೆ ದಾಖಲು ಮಾಡಲಾಗುವುದು.
ಮಕ್ಕಳ ಕಲ್ಯಾಣ ಸಮಿತಿಯ ಮತ್ತು ಬಾಲನ್ಯಾಯ ಮಂಡಳಿಯ ಸದಸ್ಯರುಗಳಿಗೆ ಗುರುತಿನ ಚೀಟಿಗಳನ್ನು ನೀಡಲಾಗಿದೆ.
2009-10 ಸಾಲಿನಲ್ಲಿ 884 ಗಂಡು ಮತ್ತು 353 ಹೆಣ್ಣು ಮಕ್ಕಳು ಸಂಸ್ಥೆಗೆ ದಾಖಾಲಾಗಿದ್ದಾರೆ, 2010 ರ ಜನವರಿ ಅಂತ್ಯಕ್ಕೆ ಸಂಸ್ಥೆಗಳಲ್ಲಿ 714 ಬಾಲಕ್ಪರು ಮತ್ತು 611 ಬಾಲಕಿಯರು ಪಾಲನೆ ಮತ್ತು ರಕ್ಷಣೆ ಪಡೆಯುತ್ತಿದ್ದಾರೆ. 46 ಮಕ್ಕಳು ಶಿಶು ಮಂದಿರಕ್ಕೆ ದಾಖಲಾಗಿದ್ದು ಜನವರಿ 2010ರ ಅಂತ್ಯಕ್ಕೆ 40 ಮಕ್ಕಳು ಇರುತ್ತಾರೆ. 34 ಬಾಲ ಮಂದಿರಗಳು ಸಕರ್ಾರಿ ಕಟ್ಟಡದಲ್ ಲಿ ಉಳಿದವುಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

 

Helplines

 




Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats