gototopgototop


Home
पीडीएफ़ मुद्रण
AddThis Social Bookmark Button

ಅನುಪಾಲನಾ ಸೇವೆಗಳು

ಬಾಲಕರ ಬಾಲಮಂದಿರಗಳಿಂದ 18 ವರ್ಷ ಪೂರ್ಣಗೊ0ಡು ವಗರ್ಾವಣೆಗೊಳಪಟ್ಟ ಮಕ್ಕಳನ್ನು ದಾಖಲಿಸಿಕೊಳ್ಳಲು 3 ಪುರುಷರ ಅನುಪಾಲನಾ ಗೃಹಗಳು ಕಾರ್ಯ ನಿರ್ವಹಿಸುತ್ತಿವೆ. ಐ.ಟಿ.ಐ. ಪಾಲಿಟೆಕ್ನಿಕ್ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪಡೆಯಲು ಮಕ್ಕಳನ್ನು ಪ್ರೋತ್ಸಾಹಿಸಲಾಗಿ ಇವರಿಗೆ ಸೂಕ್ತ ಉದ್ಯೋಗಗಳನ್ನು ದೊರಕಿಸಿ ಪುನರ್ವಸತಿ ಕಲ್ಪಿಸಲು ಶ್ರಮಿಸಲಾಗುತ್ತದೆ. ಈ ಸಾಲಿನಲ್ಲಿ 100 ದಾಖಲೆಯಾಗಿದ್ದು ಜನವರಿ 2010ರ ಅಂತ್ಯಕ್ಕೆ 100 ಯವಕರು ಸಂಸ್ಥೆಗಳಲ್ಲಿ ಇದ್ದಾರೆ.

ಸುಧಾರಣಾ ಸಂಸ್ಥೆಯ ನಿವಾಸಿಗಳಿಗೆ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ ನೀಡುವ ಬಗ್ಗೆ:
ಸುಧಾರಣಾ ಸಂಸ್ಥೆಗಳಲ್ಲಿ ದಾಖಲಾಗುವ ಮಹಿಳೆಯರು ಮತ್ತು ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅನುಕೂಲವಾಗುವಂತೆ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಪುನರ್ವಸತಿ ಕಲ್ಪಿಸುವ ದೃಷ್ಟಿಯಿಂದ ರೂಪಿಸಲಾಗಿದೆ. ಇದನ್ನು ಶಿಕ್ಷಣದ ಜೊತೆಗೆ ವಿವಿಧ ಕುಶಲ ಕಲೆಗಳಲ್ಲಿ ತರಬೇತಿ ನೀಡಿ ಅವರಿಗೆ ಮುಂದಿನ ಜೀವನಕ್ಕೆ ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಯಡಿ ಎಲ್ಲಾ ಸುಧಾರಣಾ ಸಂಸ್ಥೆಯ ನಿವಾಸಿಗಳು ಆಸಕ್ತಿ ಅರ್ಹತೆಗೆ ಅನುಗುಣವಾಗಿ ಯಾವುದೇ ಕುಶಲತೆಯಲ್ಲಿ ಪ್ರತಿಷ್ಟಿತ ತರಬೇತಿ ಕೇಂದ್ರಗಳಲ್ಲಿ ಅಥವಾ ಪ್ರತಿಸ್ಠಿತ ಸಂಸ್ಥೆಗಳ ಮೂಲಕ ಸುಧಾರಣಾ ಸಂಸ್ಥೆಗಳ ಆವರಣದಲ್ಲಿ ತರಬೇತಿಯನ್ನು ಪಡೆಯಬಹುದಾಗಿದೆ.
ವಿವಿಧ ವಯೋವರ್ಗದ ನಿವಾಸಿಗಳಿಗೆ ಸೈಕಲ್ ದುರಸ್ತಿ, ಮೊಬೈಲ್ ದುರಸ್ತಿ, ಆಟೋಮೊಬೈಲ್ ರಿಪೇರಿ, ಪ್ಲಂಬಿಂಗ್ ಕೆಲಸ, ಬಾರ್ ಬೆಂಡಿಂಗ್, ಹೇರ್ ಕಟಿಂಗ್, ಕಂಪ್ಯೂಟರ್ ತರಬೇತಿ, ಅಗರಬತ್ತಿ ಮತ್ತು ಅಗರಬತ್ತಿ ಕೊಳವೆಗಳ ತಯಾರಿಕೆ, ಚಾಲನಾ ತರಬೇತಿ, ಆಹಾರ ಸಂಸ್ಖರಣೆ, ಚರ್ಮದ ಚೀಲ, ಬ್ಯೂಟೀಷಿಯನ್ ತರಬೇತಿ, ಹೊಲಿಗೆ ತರಬೇತಿ ಹೋಂ ನಸರ್ಿಂಗ್, ಜರಿ ಕೆಲಸ, ಸಿದ್ದ ಉಡುಪು ಪ್ರತಿ ನಿವಾಸಿಗೆ ವರ್ಷದಲ್ಲಿ ಎರಡು ತರಬೇತಿ ಪಡೆಯಲು ಅವಕಾಶ ಇರುತ್ತದೆ. ಇದರೊಂದಿಗೆ ಅವರು ಗುಂಪು ತರಬೇತಿಯನ್ನು ಪಡೆಯಬಹುದಾಗಿದೆ. ಪ್ರತಿ ನಿವಾಸಿಗಿ ಗರಿಷ್ಟ 10000/- ರೂಪಾಯಿಗಳವರೆಗೂ ಹಣಕಾಸು ನೆರವು ನೀಡಲಾಗುವುದು. ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದವರು ಡಿಪ್ಲೋಮಾ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಸದರಿ ತರಬೇತಿಗೆ ತಗಲುವ ವೆಚ್ಚವನ್ನು ಇಲಾಖೆಯು ಭರಿಸುತ್ತದೆ.
ಈ ಕಾರ್ಯಕ್ರಮಕ್ಕಾಗಿ 20 ಲಕ್ಷ ರೂಪಾಯಿಗಳನ್ನು ನಿಗದಿಮಾಡಲಾಗಿದ್ದು ಈ ಸಾಲಿನಲ್ಲಿ 3.22 ಲಕ್ಷ ರೂಪಾಯಿಗಳನ್ನು ಜನವರಿ 2010ರವರೆಗೆ ಖಚರ್ು ಮಾಡಲಾಗಿದೆ.

 


Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats